ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಆಗಸ್ಟ್ ಅಡಾಲ್ಫ್ ಕುಂಡ್‌ರವರು ೧೮೩೯ರ ನವೆಂಬರ್ ೧೮ರಂದು ಮೀಕ್ಲೆನ್‌ಬರ್ಗ್‌ನ ಶ್ವೇರಿನ್‌ನಲ್ಲಿ ಜನಿಸಿದರು. ಅನಿಲಗಳಲ್ಲಿ ಮತ್ತು ಘನಪದಾರ್ಥಗಳಲ್ಲಿ ಶಬ್ದ ಸಂಚರಿಸುವ ವೇಗವನ್ನು ಕಂಡುಹಿಡಿಯಲು ಅನುಕೂಲವಾದ ಸರಳ ಉಪಕರಣ ‘ಕುಂಡ್ ನಳಿಗೆ’ಯನ್ನು (’ ) ಕುಂಡ್‌ರವರು ೧೮೬೬ರಲ್ಲಿ ಕಂಡುಹಿಡಿದರು. ಅಲ್ಲದೆ ಅವರು ಮಿಂಚಿನ ರೋಹಿತದ ಬಗ್ಗೆ ಮತ್ತು ಹರಳುಗಳ ವಿದ್ಯುತ್ ಸ್ವಭಾವಗಳ ಬಗ್ಗೆ ತಮ್ಮ ಪರಿವೀಕ್ಷಣೆಯನ್ನು ಪ್ರಕಟಿಸಿದರು. ಕುಂಡ್‌ರವರು ೧೮೯೪ರ ಮೇ ೨೧ರಂದು ನಿಧನರಾದರು. == ಉಲ್ಲೇಖಗಳು ==